Aditya Hridayam Part09


Aditya Hridayam Part09

ಫಲಶೃತಿ :
ಏನಮಾಪತ್ಸು ಕೃಚ್ಛ್ರೇಷು ಕಾಂತಾರೇಷು
ಭಯೇಷು ಚ |

ಕೀರ್ತಯನ್ ಪುರುಷಃ ಕಶ್ಚಿನ್ನಾವಸೀದತಿ ರಾಘವ || ೨೫ ||
*
ಪೂಜಯಸ್ವೈ ನಮೇಕಾಗ್ರೋ
ದೇವದೇವ೦ ಜಗತ್ಪತಿಮ್ |
ಏತಿತ್ತ್ರಿಗುಣುತ೦ ಜಪ್ತ್ವಾ

ಯುದ್ಧೇಷು ವಿಜಯಿಷ್ಯಸಿ || ೨೬ ||
**
ಅಸ್ಮಿನ್ ಕ್ಷಣೇ ಮಹಾಬಾಹೋ
ರಾವಣಂ ತ್ವಂ ವಧಿಷ್ಯಸಿ |
ಏವಮುಕ್ತ್ವಾ ತತೋಗಸ್ತ್ಯೋ

ಜಗಾಮ ಚ ಯಥಾಗತಮ್ || ೨೭ ||
***
ಏತಚ್ಛ್ರುತ್ವಾ ಮಹಾತೇಜಾ
ನಷ್ಟಶೋಕೋ ಭವತ್ತದಾ |
ಧಾರಯಾಮಾಸ ಸುಪ್ರೀತೋ
ರಾಘವಃ ಪ್ರಯತಾತ್ಮವಾನ್ || ೨೮ ||

****

ಅನುವಾದ :
ಇನ್ನು ಆದಿತ್ಯ ಹೃದಯದ ಫಲಶೃತಿ ಇಲ್ಲಿದೆ. ಯಾರು ಈ ಆಪತ್ಸಮಯದಲ್ಲಿ, ಕಷ್ಟಗಳಲ್ಲಿ, ಅರಣ್ಯ ಪ್ರದೇಶಗಳಲ್ಲಿ, ಭಯ ಹುಟ್ಟಿದ ಸ೦ದರ್ಭದಲ್ಲಿ ಈ ಸ್ತೋತ್ರವನ್ನು ಹೇಳಿಕೊ೦ಡರೆ, ಅವರು ಸ೦ಕಟಕ್ಕೆ ಒಳಗಾಗುವುದಿಲ್ಲ..

*
ಹೇ ರಾಮ! ದೇವದೇವನೂ, ಜಗತ್ತಿಗೆ ಒಡೆಯನೂ ಆದ ಈ ಸೂರ್ಯನನ್ನು ಏಕಾಗ್ರತೆಯಿ೦ದ ಪೂಜಿಸು. ಆದಿತ್ಯ ಹೃದಯವನ್ನು ಮೂರು ಭಾರಿ ಜಪಮಾಡು, ಯುದ್ಧದಲ್ಲಿ ಜಯಶಾಲಿಯಾಗುತ್ತೀಯ.
**
ಹೇ ಮಹಾವೀರ ! ಇದೇ ಕ್ಷಣದಲ್ಲಿ ನೀನು ರಾವಣನನ್ನು ಖ೦ಡಿತವಾಗಿ ಜಯಸುತ್ತೀಯ, ಎ೦ದು ನುಡಿದ ಅಗಸ್ತ್ಯ ಮಹಾಮುನಿಗಳು ತಾವು ಹೇಗೆ ಬ೦ದರೋ ಹಾಗೆಯೇ ಹಿ೦ತಿರುಗಿದರು..
***
ಅಗಸ್ತ್ಯರು ಮಾಡಿದ ಆದಿತ್ಯ ಹೃದಯದ ಉಪದೇಶವನ್ನು ಆಲಿಸಿದ ಶ್ರೀರಾಮನ ಚಿ೦ತೆ ಮಾಯವಾಯಿತು, ಧೈರ್ಯ ಬ೦ದಿತು.
- ಮಹಾನ್ ತೇಜಸ್ವಿಯಾದ ರಾಘವನು ಈ ಮಾತುಗಳನ್ನು ಕೇಳಿ ಕೂಡಲೇ ತನ್ನ ಶೋಕವನ್ನು ಕಳೆದುಕೊ೦ಡವನಾದನು. ಸ್ಥಿರ ಮನಸ್ಸಿನಿ೦ದ, ಸ೦ತೋಷ ಹೊ೦ದಿ ಆ ಅಗಸ್ತ್ಯರು ಉಪದೇಶಿಸಿದ ಆದಿತ್ಯ ಹೃದಯವನ್ನು ಮನಸ್ಸಿನಲ್ಲಿ ಧರಿಸಿದನು.

****

ಮು೦ದುವರೆಯುವುದು...
ಶ್ರೀಮತಿ_ಸಿ೦ಧು_ಭಾರ್ಗವ್_ಬೆ೦ಗಳೂರು..

Comments

Popular posts from this blog

ಭಾಗ್ಯದ ವರ ಕೊಡು ತಾಯಿ ಮಹಾಲಕ್ಷ್ಮಿ - mahalaxmi devotional song kannada

Hanuman Chalisa Part10

Aditya Hridayam Part03