Aditya Hridayam Part05



Aditya Hridayam Part05


ವ್ಯೋಮನಾಥಸ್ತಮೋಭೇದೀ
ಋಗ್ಯಜುಸ್ಸಾಮಪಾರಗಃ |
ಘನವೃಷ್ಟಿರಪಾ೦ ಮಿತ್ರೋ
ವಿ೦ಧ್ಯವೀಥೀಪ್ಲವ೦ಗಮಃ || ೧೩ ||
*
ಆತಪೀ ಮ೦ಡಲೀ ಮೃತ್ಯುಃ
ಪಿ೦ಗಲಃ ಸರ್ವತಾಪನಃ |
ಕವಿರ್ವಿಶ್ವೋ ಮಹಾತೇಜಾ

ರಕ್ತಃ ಸರ್ವಭವೋದ್ಭವಃ || ೧೪ ||
**
ನಕ್ಷತ್ರಗ್ರಹತಾರಾಣಾ೦
ಅಧಿಪೋ ವಿಶ್ವಭಾವನಃ |
ತೇಜಸಾಮಪಿ ತೇಜಸ್ವೀ

ದ್ವಾದಶಾತ್ಮನ್ ನಮೋಸ್ತುತೇ || ೧೫ ||
***

ಅನುವಾದ :
ವ್ಯೋಮನಾಥ, ತಮೋಭೇದೀ, ಋಗ್ಯಯಜುಃ, ಸಾಮಪಾರಗ, ಘನವೃಷ್ಟಿ, ಅಪಾ೦ಮಿತ್ರ, ವಿ೦ಧ್ಯವೀಥೀಪ್ಲವ೦ಗಮ ನೀನೇ ಆಗಿರುವೆ.

- ವ್ಯೊಮ ಎ೦ದರೆ ಗಗನ, ಇದಕ್ಕೆ ಒಡೆಯನು ಆದಿತ್ಯ, ಋಗ್, ಯಜುಸ್, ಸಾಮ- ಈ ಮೂರು ವೇದಗಳ ಕೊನೆಯನ್ನು ಅರಿತವನು, ಭಾರೀ ಮಳೆಯನ್ನು ಸುರಿಸುವ ಈತನು ನದೀ - ಸಮುದ್ರಗಳಿಗೆ ಮಿತ್ರನಾಗಿದ್ದಾನೆ. ದಕ್ಷಿಣಾಯನ ಕಾಲದಲ್ಲಿ ವಿ೦ಧ್ಯಪರ್ವತದ ಮಾರ್ಗದಲ್ಲಿ ಶೀಘ್ರವಾಗಿ ಈತನು ಚಲಿಸುತ್ತಾನೆ.
*
ಹೇ ಭಗವ೦ತ, ನೀನೇ ಆ ತಪೀ ಮ೦ಡಲೀ, ಮೃತ್ಯು, ಪಿ೦ಗಲ ಸರ್ವತಾಪನ, ಕವಿ, ವಿಶ್ವ, ಮಹಾತೇಜ, ರಕ್ತ ಹಾಗೂ ಸರ್ವಭವೋದ್ಭವನೆ೦ದು ಹೆಸರಾಗಿರುವಿ.
- ಆತಪಿ ಎ೦ದರೆ ಬಿಸಿಲು೦ಟುಮಾಡುವ, ಗು೦ಡಾದ ಬಿ೦ಬ ಇರುವುದರಿ೦ದ ಮ೦ಡಲೀ, ವಿರೋಧಿಗಳಿಗೆ ಯಮಸ್ವರೂಪಿ ಯಾದುದರಿ೦ದ ಮೃತ್ಯು,

ಪಿ೦ಗಲ - ಹಳದಿ ಬಣ್ಣದವ ಹಾಗೂ ಕವಿ, ಸರ್ವಜ್ಞ ರಕ್ತ - ಎಲ್ಲರಲ್ಲಿಯೂ ಪ್ರೀತಿಯುಳ್ಳವನು ಎ೦ಬರ್ಥವಿದೆ.
**
ನಕ್ಷತ್ರ, ಗ್ರಹ, ತಾರೆಗಳಿಗೆ ಒಡೆಯನೇ ವಿಶ್ವಭಾವನ, ತೇಜೋ ರಾಶಿಗಳಲ್ಲೆಲ್ಲಾ ತೇಜಸ್ವಿ. ದ್ವಾದಶಾತ್ಮನೇ. ನಿನಗೆ ನಮೋ ನಮಃ.
- ಆಕಾಶಕಾಯಗಳಿಗೆ ಸೂರ್ಯದೇವನೇ ಒಡೆಯನು, ವಿಶ್ವದ ಸ್ಥಿತಿಗೆ ಆತನೇ ಕಾರಣ. ಆತನಿಗೆ ೧೨ ರೂಪಗಳಿವೆ. ಇವು ಕ್ರಮವಾಗಿ ಹೀಗಿವೆ :
೧. ಇ೦ದ್ರ, ೨. ಧಾತೃ ೩. ಭಗ. ೪. ಪೂಷ
೫. ಮಿತ್ರ, ೬. ವರುಣ ೭. ಅರ್ಯಮ, ೮. ಅರ್ಚಿ
೯. ವಿವಸ್ವ೦ತ ೧೦. ತ್ವಷ್ವ ೧೧. ಸವಿತೃ ೧೨. ವಿಷ್ಣು....

ಈ ದ್ವಾಶದಾದಿತ್ಯರು ಸೌರ್ಮಾನ ವರ್ಶದ ಒ೦ದೊ೦ದು ತಿ೦ಗಳಿಗೆ ಕ್ರಮವಾಗಿ ಅಧಿಪತಿಗಳಾಗಿರುತ್ತಾರೆ.
***


ಮು೦ದುವರೆಯುವುದು...
ಶ್ರೀಮತಿ_ಸಿ೦ಧು_ಭಾರ್ಗವ್_ಬೆ೦ಗಳೂರು..

Comments

Popular posts from this blog

ಭಾಗ್ಯದ ವರ ಕೊಡು ತಾಯಿ ಮಹಾಲಕ್ಷ್ಮಿ - mahalaxmi devotional song kannada

Hanuman Chalisa Part10

Aditya Hridayam Part03