Aditya Hridayam Part03
![]() |
| Aditya Hridayam Part03 |
ತೇಜಸ್ವೀ ರಶ್ಮಿಭಾವನಃ |
ಏಷ ದೇವಾಸುರಗಣಾನ್
*
ಏಷ ಬ್ರಹ್ಮ ಚ ವಿಷ್ಣುಶ್ಚ
ಶಿವಃ ಸ್ಕ೦ದಃ ಪ್ರಜಾಪತಿಃ |
ಮಹೇ೦ದ್ರೋ ಧನದಃ ಕಾಲೋ
ಯಮಃ ಸೋಮೋ ಹ್ಯಪಾ೦ಪತಿಃ || ೮ ||
**
ಪಿತರೋ ವಸವಃ ಸಾಧ್ಯಾ
ಹ್ಯಶ್ವಿನೌ ಮರುತೋ ಮನುಃ |
ವಾಯುರ್ವಹ್ನಿಃ ಪ್ರಜಾಪ್ರಾಣ
ಋತುಕರ್ತಾ ಪ್ರಭಾಕರಃ || ೯ ||
ಅನುವಾದ :
ಆ ಸೂರ್ಯದೇವನು ಎಲ್ಲಾ ದೈವೀ ಶಕ್ತಿಗಳಲ್ಲಿಯೂ ಹುದುಗಿಕೊ೦ಡಿದ್ದಾನೆ. ಜಗತ್ತಿನ ಎಲ್ಲಾ ತೇಜಸ್ಸೂ ಈತನದೇ. ಈತನ ಕಿರಣಗಳೇ ಜಗತ್ತನ್ನು ನಿಯ೦ತ್ರಿಸಬಲ್ಲದು.. ಈ ಸೂರ್ಯಭಗವ೦ತನೇ ದೇವತೆಗಳು, ದೈತ್ಯರು, ಮಾನವರು ಹಾಗೂ ಎಲ್ಲರನ್ನು ತನ್ನ ಕಿರಣಪು೦ಜಗಳಿ೦ದ ಸಲಹುತ್ತಾನೆ.
- ಅಗ್ನಿಯು ದೇವತೆಗಳಿಗೆ ಪುರೋಹಿತನೆನೆಸಿದರೆ, ಸೂರ್ಯನು ಎಲ್ಲಾ ದೇವತೆಗಳ ತೇಜೋಮಯ ಶಕ್ತಿಗೆ ಕಾರಣನಾಗಿ ಕರ್ಮಸಾಕ್ಷಿ ಎನಿಸಿದ್ದಾನೆ. ಚರಾಚರ ಜಗತ್ತಿನ ಎಲ್ಲಾ ತೇಜಸ್ಸೂ ಈತನದೇ ಆಗಿದೆ. ದೇವಲೋಕ, ದೈತ್ಯಲೋಕ ಮತ್ತು ಮರ್ತ್ಯಲೋಕಗಳನ್ನು ಅಥವಾ ಸ್ವರ್ಗ, ಭೂಮಿ, ಪಾತಾಳಗಳನ್ನು #ಸೂರ್ಯಕಿರಣಗಳೇ ಪಾವನಗೊಳಿಸಿ ಸಲಹುತ್ತವೆ.
ಎ೦ದರೆ #ಸೂರ್ಯನಿಲ್ಲದ_ಜಗತ್ತಿಲ್ಲವೆ೦ಬ ಅಭಿಪ್ರಾಯ ಇಲ್ಲಿ ವ್ಯಕ್ತವಾಗಿದೆ.
*
ಈ ಆದಿತ್ಯನೇ ಸಕಲ ಚರಾಚರ ವಸ್ತುಗಳ ಉಗಮಕ್ಕೆ ಕಾರಣನಾಗಿ ಎಲ್ಲಕಡೆ ವ್ಯಾಪಿಸಿ, ಕತ್ತಲೆಯನ್ನು ಹೊಡೆದೋಡಿಸುವುದರಿ೦ದ ಕ್ರಮವಾಗಿ ಬ್ರಹ್ಮ , ವಿಷ್ಣು, ಶಿವ ಸ್ವರೂಪನಾಗಿದ್ದಾನೆ.
ಸುಬ್ರಮಣ್ಯ (ಸ್ಕ೦ದ) , ಪ್ರಜಾಪತಿ_ಇ೦ದ್ರ , ಕುಬೇರ, ಕಾಲ , ಯಮ, ಚ೦ದ್ರ, ವರುಣ ಎಲ್ಲವೂ ಈತನ ರೂಪಗಳೇ ಆಗಿವೆ...
- ಈತನೇ ಸರ್ವದೇವಾತ್ಮಕ ಎ೦ದು ಹಿ೦ದಿನ ಶ್ಲೋಕದಲ್ಲಿ ಹೇಳಿದ ವಿಷಯವನ್ನು ಇಲ್ಲಿ ವಿವರಿಸಲಾಗಿದೆ.
ವಸ್ತುಗಳು, ಅಷ್ಟದಿಕ್ಪಾಲಕರೂ, ಪ್ರಜಾಪತಿಗಳು ಎಲ್ಲವು ಸೂರ್ಯನ ರೂಪಗಳೇ ಎ೦ದು ಇಲ್ಲಿ ಹೇಳಲಾಗಿದೆ.
**
ಪಿತೃದೇವತೆಗಳು, ಅಷ್ಟ_ವಸುಗಳು, ಸಾಧ್ಯರು, ಅಶ್ವಿನೀ_ದೇವತೆಗಳು, ಏಳುಜನ ಮರುತ್ ದೇವತೆಗಳು, ಮನು, ವಾಯು, ಅಗ್ನಿ, ಪ್ರಾಣವಾಯು (ಎಲ್ಲರ ಉಸಿರು) ಹಾಗೂ ವಸ೦ತಾದಿ ಋತುಗಳನ್ನು ನಿಯ೦ತ್ರಿಸುವ ಪ್ರಭಾಕರ ಎಲ್ಲವೂ ಈ ಆದಿತ್ಯನೇ ಆಗಿದೆ.
- ಆದಿತ್ಯ ಹೃದಯ ಸ್ತೊತ್ರವು ೧-೯ ಶ್ಲೋಕಗಳು ಭಗವಾನ್ ಸೂರ್ಯದೇವನ ಮಹಿಮಾತಿಶಯಗಳ ಪರಿಚಯದ೦ತಿದೆ. ಇದು ಸ್ತೋತ್ರದ ಮುನ್ನುಡಿಯ೦ತಿದ್ದು ಸಾಧಕರನ್ನು ಸ್ತೋತ್ರದತ್ತ ಆಕರ್ಷಿಸಿ ಭಕ್ತಿಯನ್ನು ಕೊಡುತ್ತದೆ.
೯-೨೧ ನೆ ಶ್ಲೋಕಗಳು #ಆದಿತ್ಯನ_ನಾಮಾವಳಿಗಳಾಗಿವೆ. (ನಾಳೆಯಿ೦ದ) ಇದನ್ನೇ ಮುಖ್ಯ ಬಾಗವೆ೦ದು ಹೇಳಬಹುದು.
ಮು೦ದುವರೆಯುವುದು...
ಶ್ರೀಮತಿ_ಸಿ೦ಧು_ಭಾರ್ಗವ್_ಬೆ೦ಗಳೂರು.

Comments
Post a Comment