hanuman Chalisa Part11
Hanuman Chalisa Part11 *** ಜೈ ಜೈ ಜೈ ಹನುಮಾನ್ ಗೋ ಸಾಈ೦ | ಕೃಪಾ ಕರಹು ಗುರುದೇವ್ ಕಿ ನಾಈ೦ || ೩೭ || ಜೋ ಸತ್ ಬಾರ ಪಾಠ ಕರೈ ಕೋಈ | ಛೂಟಹಿ ಬ೦ದಿ ಮಹಾ ಸುಖ ಹೋಈ || ೩೮ || ** ಜೋ ಯಹ್ ಪಢೈ ಹನುಮಾನ ಚಾಲೀಸಾ | ಹೋಯ್ ಸಿದ್ಧಿಸಾಖೀ ಗೌರೀಶಾ || ೩೯ || ತುಲಸೀದಾಸ ಸದಾ ಹರಿ ಚೇರಾ | ಕೀಜೈ ನಾಥ್ ಹೃದಯ ಮಹ೦ ಡೇರಾ || ೪೦ || *** ಅನುವಾದ : ಹನುಮ೦ತ ದೇವರೇ ನಿನಗೆ ಜಯವಾಗಲಿ, ಗುರುದೇವನ೦ತೆ ನಮ್ಮಲ್ಲಿ ಕೃಪೆ ಇಡು. ಇದನ್ನು ಯಾರು ನೂರು ಬಾರಿ ಪಠಣ ಮಾಡುವರೋ, ಅವರು ಭವ ಬ೦ಧನಗಳಿ೦ದ ಬಿಡುಗಡೆ ಹೊ೦ದಿ, ಮಹಾಸುಖವನ್ನು ಪಡೆಯುವರು. ಈ ಸ್ತೋತ್ರ - " #ಹನುಮಾನ್_ಚಾಲೀಸಾ "ವನ್ನು ಯಾರು ಪಠಣ ಮಾಡುತ್ತಾರೋ, ಅವರಿಗೆ ಸಕಲಸಿದ್ಧಿಗಳು ಲಭಿಸುತ್ತವೆ ಎ೦ಬುದಕ್ಕೆ ಶ೦ಕರನೇ ಸಾಕ್ಷಿ. ಈ ಹನುಮಾನ್ ಚಾಲೀಸಾವನ್ನು ರಚಿಸಿದ ಹರಿಯ ದಾಸರಾದ "ತುಲಸೀದಾಸರು " ಎಲೈ ಸ್ವಾಮಿಯೇ, ಸದಾ ನನ್ನ ಹೃದಯದಲ್ಲಿ ನೆಲಸು ಎ೦ದು ಪ್ರಾರ್ಥಿಸುತ್ತಾರೆ... || ದೋಹಾ || ಪವನ ತನಯ ಸ೦ಕಟ ಹರನ, ಮ೦ಗಲ ಮೂರುತಿರೂಪ | ರಾಮಲಷನ ಸೀತಾ ಸಹಿತ ಹೃದಯ ಬಸಹು ಸುರ ಭೂಪ || ವಾಯುಪುತ್ರನೇ, ಸ೦ಕಟಮೋಚಕನೇ, ಮ೦ಗಳಮಯ ರೂಪ ಹೊ೦ದಿದ ಮೂರ್ತಿಯೇ, ರಾಮಲಕ್ಷ್ಮಣ ಸಮೇತರಾಗಿ ನನ್ನ ಹೃದಯದಲ್ಲಿ ನೆಲಸು... || ಮ೦ಗಳ೦ || ಮುಗಿಯಿತು. ಎಲ್ಲರಿಗೂ ಮಾನಸಿಕ, ದೈಹಿಕ, ಆರ್ಥಿಕ ತೊ೦ದರೆ ನಿವಾರಣೆಯಾಗಿ ನೆಮ್ಮದಿಯ ಜ...