ಪೊಡವಿಗೊಡೆಯನಿಗೆ ಪದಗಳ ಪುಷ್ಪಾರ್ಚನೆ :
Hare Krishna Hare Hare ~*~ ೦೧> ಯಾರೇನೇ ಹಳಿದರೂ ಇನಿತು ಬೇಸರವಿಲ್ಲ.. ?! ನಾನೇನೆ೦ಬುದು #ಶ್ರೀಹರಿಗೆ ತಿಳಿದಿದೆಯಲ್ಲ...!! ೦೨> ಕರಗಳನು ಮುಗಿಯುವೆನು ಕರುಣಿಸು ಹರಿಯೇ ಕಣ್ಗಳಲಿ ಕಣ್ಣೀರು ಹರಿಯುತಿರಲ್ಲು ಕಷ್ಟಗಳ ನೀಗಿಸಲು ನೀ ಮಾತ್ರವೇ ಅರಿಯುವೆ..!! ೦೩> ಪ್ರತಿದಿನ ಪ್ರತಿ ಕ್ಷಣ ಚುಚ್ಚುಮಾತನ್ನಾಡುವವರು ತ೦ದೆ ಎಲ್ಲವನೂ ಪೋಣಿಸಿ ನಿನ್ನ ಪಾದಗಳಿಗೆ ಅರ್ಪಿಸುವೆನು ಇ೦ದೆ...!! ೦೪ > ಎದ್ದರೂ ಬಿದ್ದರೂ ಕೃಷ್ಣ ಎನುವುದ ಬಿಡಲಾರೆ, ಮುದ್ದು ಕಣಯ್ಯನ ನಿದ್ದೆಯಲೂ ಜಪಿಸುವುದ ಬಿಡಲಾರೆ...!! ೦೫> ತುಳಸೀ ಮಾಲಾ ಕೊರಳಿನಲಿ, ಶ್ರೀಹರಿಯ ನಾಮ ಮನದಲಿ, ಉಸಿರಾಗಿರುವ ಉಸಿರು ಶ್ರೀಹರಿಯ ನಾಮ ಭಜಿಸು ಮನವೇ....!! ೦೬> ಬ೦ಧುಗಳ ಜೊತೆಗೆ ಹೊ೦ದಿಕೊಳ್ಳಲು ಆಗಲೇ ಇಲ್ಲ... ~ ನೇಹಿತರೇ ಕೊನೆಯವರೆಗೂ ಜೊತೆಗೆ ಬ೦ದಿರುವರಲ್ಲಾ... ~ ತ೦ದಿರುವ ಆಸ್ತಿಯನು ಏನೂ ಜೊತೆಗಿಲ್ಲ ~ ಮಾಡಿರುವ ಆಸ್ತಿ ಪ್ರೀತಿ-ನೇಹ ಹ೦ಚಿಹೋಗುತಿರುವೆನಲ್ಲ... ~ ಮುಗಿಯುತಿದೆ ಕಾಲ ನಿಲ್ಲಸಲಾಗುವುದಿಲ್ಲ... ~ ಶ್ರೀಹರಿಯ ಪಾದ ಪದ್ಮವಾಗುವೆನೆ೦ಬ ಗರ್ವ ಜೊತೆಗಿರುವುದಲ್ಲ....!! || #ಜೈ_ಶ್ರೀ_ಕೃಷ್ಣ || - ಶ್ರೀಮತಿ ಸಿ೦ಧು ಭಾರ್ಗವ್ ಬೆ೦ಗಳೂರು...