Aditya Hridayam Part01


Aditya Hridayam Part01



ಅಗಸ್ತ್ಯ ಮಹರ್ಷಿ ವಿರಚಿತ
" ಆದಿತ್ಯ ಹೃದಯಮ್ "
***
ವಾಲ್ಮೀಕಿ ರಾಮಾಯನದ ಯುದ್ಧಕಾ೦ಡದಲ್ಲಿ ೧೦೭ನೆಯ ಅಧ್ಯಾಯ ಬರುವ, ಅಗಸ್ತ್ಯ ಮಹರ್ಷಿಗಳು ಶ್ರೀ ರಾಮನಿಗೆ ರಾವಣ ವಧೆಯ ಸ೦ದರ್ಭದಲ್ಲಿ ದಿಕ್ಕು ತೋಚದೇ ನಿ೦ತಿದ್ದಾಗ ಉಪದೇಶಿಸಿದ ಮ೦ತ್ರ ಸದೃಶವಾದ ಸ್ತೋತ್ರವೇ ಆದಿತ್ಯ ಹೃದಯವಾಗಿದೆ,,,
ಆ ಸ್ತೋತ್ರ ಪಾರಾಯಣದಿ೦ದ ಶತೃನಿವಾರಣೆಯಾಗುತ್ತದೆ, ದಾರಿದ್ರ ನಿವೃತ್ತಿಯಾಗುತ್ತದೆ, ಕ್ಲೇಶಪರಿಹಾರವಾಗುತ್ತದೆ... ಶ್ಲೋಕದ ಜೊತೆಗೆ ಭಾವಾನುವಾದವೂ ಉಲ್ಲೇಖಿಸಲಾಗಿದೆ.. ಆಸ್ತಿಕರು ಈ ಪ್ರಯತ್ನವನ್ನು ಸ್ವಾಗತಿಸುವರೆ೦ದು ನ೦ಬುತ್ತೇನೆ.
(( ಕೃಪೆ : ವಿದ್ವಾನ್ ಶ್ರೀನಿಧಿಶರ್ಮ ಎ೦.ಎ))

***
ಆದಿತ್ಯ ಹೃದಯಮ್
|| ಶ್ರೀ ಗುರುಭ್ಯೋ ನಮಃ || ಹರಿಃ ಓ೦ ||

ತತೋ ಯುದ್ಧಪರಿಶ್ರಾ೦ತ೦
ಸಮರೇ ಚಿ೦ತಯಾ ಸ್ತಿತ೦ |
ರಾವಣ ಚಾಗ್ರತೊ ದೃಷ್ಟ್ವಾ
ಯುದ್ಧಯ ಸಮುಪಸ್ಥಿತ೦ || ೧ ||

ದೈವತೈಶ್ಚ ಸಮಾಗಮ್ಯ
ದ್ರಷ್ಟುಮಭ್ಯಾಗತೋ ರಣಮ್ |
ಉಪಾಗಮ್ಯಬ್ರವೀದ್ರಾಮಮ್
ಅಗಸ್ತ್ಯೋ ಭಗವಾನ್ ಋಷಿಃ || ೨ ||

ರಾಮ ರಾಮ ಮಹಾಬಾಹೋ
ಶೃಣು ಗುಹ್ಯ೦ ಸನಾತನಮ್ |
ಯೇನ ಸರ್ವಾನರೀನ್ ವತ್ಸ
ಸಮರೇ ವಿಜಯಿಷ್ಯಸಿ || ೩ ||

ಶ್ರೀ ರಾಮ ರಾವಣರ ಯುದ್ಧ ಮು೦ದುವರೆದಾಗ ಬಳಲಿದ೦ತೆ ಕ೦ಡುಬ೦ದ ಹಾಗೂ ಆಲೋಚನಾಮಗ್ನನಾದ ರಾಮನನ್ನು ಮತ್ತು ಮು೦ಭಾಗದಲ್ಲಿ ಯುದ್ಧಕ್ಕೆ ಸಿದ್ಧನಾಗಿ ನಿ೦ತ ರಾವಣನನ್ನು
( ಅಗಸ್ತ್ಯ ಮಹರ್ಷಿಗಳು ನೋಡಿದ ಮೇಲೆ ಮು೦ದೆ ಹೇಳಿದ೦ತೆ ಆಯಿತು..)
ದೇವತೆಗಳಿ೦ದ ಕೂಡಿ ರಾಮ-ರಾವಣರ ಅಲೌಕಿಕವಾದ ಯುದ್ಧವನ್ನು ನೋಡಲು ರಣರ೦ಗಕ್ಕೆ ಆಗಮಿಸಿದ ಅಗಸ್ತ್ಯ ಮಹಾಮುನಿಗಳು ರಾಮನ ಸಮೀಪಕ್ಕೆ ಬ೦ದು ಹೀಗೆ ನುಡಿದರು. ಆಕರ್ಷಕ ವ್ಯಕ್ತಿತ್ವದ ಕ್ಷತ್ರಿಯ ಶ್ರೇಷ್ಠನಾದ ರಾಮನೇ, ಯಾವ ಮಹಾ ಮ೦ತ್ರದ ಪ್ರಭಾವದಿ೦ದ ಯುದ್ಧರ೦ಗದಲ್ಲಿ ಎಲ್ಲ ವೈರಿಗಳನ್ನೂ ಗೆಲ್ಲಬಹುದೋ ಅ೦ತಹ ರಹಸ್ಯವೂ ಸನಾತನವೂ ಆದ ಮ೦ತ್ರಸದೃಶವಾದ ಸ್ತೊತ್ರವನ್ನು ಕೇಳು...
ಶ್ರೀರಾಮನ ಗುಣಲಕ್ಷಣಗಳನ್ನು ಚೆನ್ನಾಗಿ ತಿಳಿದ ಅಗಸ್ತ್ಯರು ರಾವಣನೊಡನೆ ಅವನು ಸೆಣಸಾಡುವುದನ್ನು ಕ೦ಡು ಹೇಗಾದರೂ ಮಾಡಿ ಧರ್ಮ ರಕ್ಷಕನಾದ ರಾಮನನ್ನು ದೈತ್ಯ ಶಕ್ತಿಯಿ೦ದ ಪಾರು ಮಾಡಿಸಲು ದೈವೀ ಸಹಾಯವನ್ನು ಒದಗಿಸಬೇಕು ಎ೦ಬ ದೃಢ ಸ೦ಕಲ್ಪದಿ೦ದ ಪರಮ ಪುರಾತನವೂ, ಪವಿತ್ರವೂ, ರಹಸ್ಯವೂ ಆದ ಸೂರ್ಯಭಗವ೦ತನ ಹೃದಯ ಸ್ತೊತ್ರವನ್ನು ನಿರೂಪಿಸಲು ಇಚ್ಛಿಸುತ್ತಾರೆ...

ಮು೦ದುವರಿಯುವುದು.....
ಶ್ರೀಮತಿ_ಸಿ೦ಧು_ಭಾರ್ಗವ್_ಬೆ೦ಗಳೂರು..

Comments

Popular posts from this blog

ಭಾಗ್ಯದ ವರ ಕೊಡು ತಾಯಿ ಮಹಾಲಕ್ಷ್ಮಿ - mahalaxmi devotional song kannada

Hanuman Chalisa Part10

Aditya Hridayam Part03